'ರಾಮಾಚಾರಿ - ಇದು 1991 ನೇ ವರ್ಷದ ಕನ್ನಡ ಚಲನಚಿತ್ರವಾಗಿದ್ದು ಇದನ್ನು ಡಿ. ರಾಜೇಂದ್ರ ಬಾಬು ಇದನ್ನು ನಿರ್ದೇಶಿಸಿದ್ದಾರೆ. ಇದನ್ನು ಎನ್. ವೀರಾಸ್ವಾಮಿ ನಿರ್ಮಿಸಿದ್ದಾರೆ. ಇದರ ಪ್ರಮುಖ ಪಾತ್ರಗಳಲ್ಲಿ ರವಿಚಂದ್ರನ್, ಮಾಲಾಶ್ರೀ ಇದ್ದಾರೆ. ಈ ಚಿತ್ರದ ಸಂಗೀತವನ್ನು ಹಂಸಲೇಖ ಸಂಯೋಜಿಸಿದ್ದಾರೆ. ಈ ಚಿತ್ರವು ಅದೇ ವರ್ಷ ತಮಿಳಿನಲ್ಲಿ ತಯಾರಾದ ಪಿ ವಾಸು ನಿರ್ದೇಶನದ ಚಿನ್ನತಂಬಿ ಎಂಬ ಚಲನಚಿತ್ರದ ರಿಮೇಕ್ ಆಗಿತ್ತು. == ಚಿತ್ರದ ನಿರ್ಮಾಣ == ರವಿಚಂದ್ರನ್ ಅವರ ಕನಸಿನ ಯೋಜನೆ "ಶಾಂತಿ ಕ್ರಾಂತಿ"ಯು ಆರ್ಥಿಕ ಸೋಲನ್ನು ಅನುಭವಿಸಿದ ನಂತರ ಈ 'ಚಲನಚಿತ್ರದ ನಿರ್ಮಾಣವನ್ನು ಪ್ರಾರಂಭ ಮಾಡಿದರು. "ಶಾಂತಿ-ಕ್ರಾಂತಿ"ಯ ನಟಿ ಮತ್ತು "ಅಂಜದ ಗಂಡು", "ಯುಗಪುರುಷ" ಮತ್ತು "ರಣಧೀರ" ಚಿತ್ರಗಳ ನಾಯಕಿ ಖುಷ್ಬೂ ಸಹಾಯ ಮಾಡಿದರು. ಅವರು ಅಂತಿಮವಾಗಿ ಚಿನ್ನತಂಬಿ ಚಿತ್ರದ ನಿರ್ಮಾಪಕರಿಗೆ ರಾಮಚಾರಿ ಚಿತ್ರದ ನಿರ್ಮಾಪಕರಾಗಲು ಮನವೊಲಿಸಿದರು . ಆಕೆ ಡಬ್ಬಿಂಗ್ ಹಕ್ಕುಗಳನ್ನು ಸಹ ಖರೀದಿಸಿದಳು. ನಂತರ, ರವಿಚಂದ್ರನ್ ವಿತರಕರನ್ನು ಹುಡುಕಲು ಪ್ರಯತ್ನಿಸಿದರು. ಸಂಪೂರ್ಣ ಯೋಜನೆ ಇಲ್ಲದೆ, ರವಿಚಂದ್ರನ್ ತಮ್ಮ ವಿತರಣಾ ಹಕ್ಕುಗಳನ್ನು ಮಾರಾಟ ಮಾಡಿದರು. ರಾಮಚಾರಿ ಚಿತ್ರವು ಹಿಟ್ ಆಯಿತು. == ಪಾತ್ರವರ್ಗ == == ಹಿನ್ನೆಲೆ ಸಂಗೀತ == ಹಂಸಲೇಖ ಈ ಚಿತ್ರಕ್ಕೆ ಹಿನ್ನೆಲೆ ಸಂಗೀತವನ್ನು ಕೊಡುವುದಲ್ಲದೆ ಚಿತ್ರದ 8 ಗೀತೆಗಳಿಗೆ ಸಾಹಿತ್ಯವನ್ನು ಮತ್ತು ಸಂಗೀತವನ್ನೊದಗಿಸಿದ್ದಾರೆ.